ಪರಮ ಪದವಿಯೆ ಶ್ರೀರಂಗಂಪರವಾಸುದೇವರೆ ಶ್ರೀರಂಗಂ
ವೇದನಾಲ್ಕು ಶೃಂಗಾರವಾದಓಂಕಾರ ವಿಮಾನವೆ ಶ್ರೀರಂಗಂಸಾಧಿಸಿ ಪೂರ್ವಾಚಾರ್ಯರು ನೆಲಸಿಹಆದಿ ವಿಮಾನವೆ ಶ್ರೀರಂಗಂ ||1||
ಸತ್ಯಲೋಕದಲಿ ಬ್ರಹ್ಮನು ಪೂಜಿಪವಸ್ತು ವಿಮಾನವೆ ಶ್ರೀರಂಗಂಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದಉತ್ತಮಾಯೋಧ್ಯವೆ ಶ್ರೀರಂಗಂ||2||
ತ್ರೇತಾಯುಗದಿ ವಿಭೀಷಣನಿಗೆ ರಘುನಾಥನು ಕೃಪೆ ಇತ್ತ ಶ್ರೀರಂಗಂಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗನಾಥ ನೆಲಸಿಹ ಶ್ರೀರಂಗಂ ||3||
ಮುನ್ನ ಕಾವೇರಿ ಉಭಯ ಮಧ್ಯದೊಳಿನ್ನು ಶೋಭಿಪುದೆ ಶ್ರೀರಂಗಂಸನ್ನುತ ಭಕ್ತರ ಸಲಹುವ ಬಿರುದಿನೊಳಿನ್ನು ತೋರುವುದೆ ಶ್ರೀರಂಗಂ||4||
ಶೇಷನ ಮೇಲೆ ಪವಳಿಸಿ ಲಂಕಾದೇಶವ ನೋಡುವ ಶ್ರೀರಂಗಂಶ್ರೀಸಿರಿನಾಯಕೀ ರಮಣಕೇಶವರಾಯರ ಮಹಿಮೆಯೆ ಶ್ರೀರಂಗಂ ||5||