ನೋಡು ನೋಡು ಗೋಪಿ ನಿನ್ನ ಮಗನ

ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ
ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ

ಮಾನಿನೀಯರೊಳಗೆ ಪೋಕಾಟವೇನಿದುಮಾನವನ್ನು ಕಳೆದ ಪರಿಯ ಹೇಳತೀರದು ||1||

ಪಿಡಿದ ಸೆರಗ ಬಿಡನು ಇನ್ನೇನ ಮಾಡಲಿತಡೆಯಲಾರೆವಮ್ಮ ಕೇಳೆ ಇವನ ಹಾವಳಿ ||2||

ಇನ್ನು ಚೆನ್ನಕೇಶವ ಕದಳಿ ರಂಗನಬನ್ನಣೇಯ ಮಾತ ಕೇಳಿ ಬಿಡುವೆ ಪುರುಷನ ||3||

Leave a Comment

Your email address will not be published. Required fields are marked *