ನೇಮವಿಲ್ಲದ ಹೋಮ

ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ

ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು ||1||

ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ ||2||

ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ||3||

Leave a Comment

Your email address will not be published. Required fields are marked *