ನೆನೆದು ನಿಷ್ಕಳಂಕರಾಗಿರೋ

ನೆನೆದು ನಿಷ್ಕಳಂಕರಾಗಿರೋ
ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ

ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ
ಹೊಲಗೇರಿಯೊಳಗೆ ಸುಳಿದಾಡುವಾಗ
ಹೊಲಿಯಾದವನು ತನ್ನ ಎದುರಿಗೆ ಬರುವಾಗ
ಕಲಿಶಿಷ್ಯನಾದ ಮಣಿವಂತನ ನೆನೆಸಿರೊ||1||

ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ
ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ
ಬದ್ಧವಾಗಿ ಗುಹ್ಯ ತೊಳೆಯುವಾಗ ಅಪ್ರ
ಬದ್ಧನಾದ ಏಕಲವ್ಯನ ನೆನೆಯಿರೋ ||2||

ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ
ವಮನವಾಗುವಾಗ ಮರಿಯದಲೆ
ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು
ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ ||3||

Leave a Comment

Your email address will not be published. Required fields are marked *