ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ
ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ||1||
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ||2||
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ||3||
Thank you ji!
What is the meaning of the word – ಪೇರುರವಿರಿದ?