ನುಡಿ ಎಲೆ ಮನವೇ, ನಿಜವನರಿತು ನುಡಿ||
ಧನದಿಂ ಸುಖವೋ ಧಾನ್ಯದಿ ಸುಖವೋ
ಜಾನಕೀನಾಥನ ನಾಮದಿ ಸುಖವೋ||
ಷಡ್ರಸಭೋಜನ ಸುರುಚಿಯು ಸುಖವೋ
ಷಡ್ರಿಪುನಾಶದ ಶಾಂತಿಯು ಸುಖವೋ||
ಭ್ರಮೆಯಿಂ ವಿಷಯದಿ ಮಜ್ಜನ ಸುಖವೋ
ರಾಮತೀರ್ಥದಲಿ ಸ್ನಾನವು ಸುಖವೋ||
ಮಮತಾಬಂಧಿತ ನರಸ್ತುತಿ ಸುಖವೋ
ಸುಮತಿ ಭಕುತನ ಶಿವನುತಿ ಸುಖವೋ||
—-ಸ್ವಾಮಿ ಹರ್ಷಾನಂದ