ನೀನೇನು ಮಾಡಲಾಪೆ

ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ

ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹಹೀನತ್ವವನು ನೀನು ಕಳೆಯಲಾಪೆಯನಾನು ನನ್ನದು ಎಂಬ ಅಹಂಕಾರವಿರೆ ನಿನ್ನಧ್ಯಾನಿಸಲು ಬುದ್ಧಿಯ ಕೊಡಲಾಪೆಯ ||1||

ಸಂಚಿತವಾಗಿರುವ ಪ್ರಾರಬ್ಧದೊಳಗೊಂದುಕಿಂಚಿತಾದರೂ ನೀನು ಕಳೆಯಲಾಪೆಯಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗವಂಚನೆ ಇಲ್ಲದೆ ನೀನಡ್ಡ ಬರಲಾಪೆಯ||2||

ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳುಬರೆದ ಬರೆಹವನು ನೀನು ತೊಡೆಯಲಾಪೆಯಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನಸ್ಮರಣೆಗೈಯಲು ಕಾಯದಿರಲಾಪೆಯ ||3||

Leave a Comment

Your email address will not be published. Required fields are marked *