ನೀನುಪೇಕ್ಷೆಯ ಮಾಡೆ

ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆನಿಗಮಗೋಚರ ಮುಕುಂದ
ಗಾನರಸಲೋಲ ಆಗಮಶೀಲ ಭಕ್ತಪರಿಪಾಲಸನ್ನುತ ಗೋಪಾಲ ಬಾಲ

ಜಪತಪಾನುಷ್ಠಾನ ಜಪಿತನೆಂದೆನಿಸುವೆನೆಅಪ್ಪ ಜಾಣತನವೆನ್ನೊಳಿಲ್ಲಗುಪಿತದಿಂ ದಾನ ಧರ್ಮವನು ನಾ ಮಾಡುವೆನೆಅಪರಿಮಿತ ಧನವು ಇಲ್ಲಅಪಾರ ಕರ್ಮಗಳ ಅನುಸರಿಸಿ ನಡೆವುದಕೆನಿಪುಣತ್ವ ಮೊದಲೆ ಇಲ್ಲರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆಸುಪವಿತ್ರ ನೀನಲ್ಲದೆ ಇಲ್ಲ – ಸಿರಿನಲ್ಲ ||1||

ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲುಮೌನದಿಂ ಬಂದು ಕಾಯ್ದೆಹೇ ನಾರಗಾ ಎಂದಜಮಿಳಗೆ ಮುಕ್ತಿಯನುನೀನೊಲಿದು ಕೃಪೆ ಮಾಡಿದೆಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡುದೀನತ್ವವನು ಬಿಡಿಸಿದೆದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿಮಾನಿ ಎನ್ನನೂ ಸಲಹದೆ – ಬರಿದೆ ||2||

ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡುಬೇಸರದಿ ಮನದಿ ನೊಂದುಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾಘಾಸಿ ಪಡಲಾರೆನಿಂದುವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದುಆಸೆ ಪಡುತಿಹೆನು ಇಂದುದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿಕೇಶವನೆ ಕರುಣಿಸಯ್ಯಾ ಬಂದು||3||

Leave a Comment

Your email address will not be published. Required fields are marked *