ನಿರಂಜನ ಹರಿಚಿದ್ಘನ

ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ–ಮೋಹನಮೂರುತಿಯನು ನೆನೆಯೊ||

ಅನುಪಮತೇಜನ ಸುಂದರರೂಪನ
ಭಕ್ತರ ಎದೆಯಲಿ ರಂಜಿಪನ|
ಕೋಟಿಚಂದ್ರಸಮ ಕಾಂತಿಯ ನಾಚಿಸಿ
ಮಿಂಚಿನಂತೆ ನಮ್ಮ ಎದೆಯೊಳು ರಂಜಿಸಿ ಮೋಹಿಪನ||

ಹೃದಯಪದ್ಮದಲಿ ಪೂಜಿಸು ಆತನ
ಶಾಂತಮಾನಸದಿ ಜ್ಞಾನನಯನದಲಿ
ಅಪೂರ್ವದರ್ಶನ ಮೋಹನನ|
ಭಕ್ತಿಯೋಗದ ಆವೇಶದಿ ಮುಳುಗಿಪ
ಚಿದಾನಂದರಸ ಸಾಗರನ||

                                —-ವಚನವೇದ

Leave a Comment

Your email address will not be published. Required fields are marked *