ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆಎನ್ನ ಮನಸು ನಯನ ಸುಪ್ರಸನ್ನವಾಯಿತು ದಯವ ಮಾಡಿಮುನ್ನ ಸಲಹಬೇಕು ಸ್ವಾಮಿ
ಪಕ್ಷಿವಾಹನ ಲಕ್ಷ್ಮೀರಮಣರಾಕ್ಷಸಾಂತಕ ಯದುಕುಲಾನ್ವಯಕುಕ್ಷಿಯೊಳು ಬ್ರಹ್ಮಾಂಡ ತಂಡವರಕ್ಷಿಸುತಲಿಹ ಸುಜನ ಪಕ್ಷಾ ||1||
ದೇಶದೇಶ ತಿರುಗಿ ನಾನುಆಶೆಭರಿತನಾದೆ ಸ್ವಾಮಿವಾಸಿ ನಿಮಗೆ ಸಲಹುವುದು ಜಗದೀಶ ಕಾಯೋ ವಾಸುದೇವ ||2||
ಕಂತು ಜನಕ ಎನ್ನ ಮೊರೆಯನಾಂತು ವಿಹಿತದಿಂದ ಸೇವೆಅಂತರವಿಲ್ಲದೆ ದಯಪಾಲಿಸೊಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ ||3||