ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವ

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವನನ್ನನೀಗ ಉದ್ಧರಿಸು ರಂಗಧಾಮ

ತಂದೆಯ ಮುಂದೆ ಮಗನನು ಬೈದು ಭಂಜಿಸಲುತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲುಕುಂದು ಗಂಡಗಲ್ಲದೆ ಹೆಂಡತಿಗುಂಟೆನಿಂದನೆ ಎಲೆ ದೇವ||1||

ದೊರೆ ನೋಡುತಿದ್ದಂತೆ ಬಂಟನನುಪರರು ಕೊಂಡೊಯ್ಯಲು ಕುಂದುಅರಸಗಲ್ಲದೆ ಆಳಿಗೇನುಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನದುರಿತಂಗಳೆಲ್ಲ ಕಾಡುತಿವೆ ಪರಿಹರಿಸು ಎಲೆ ದೇವ ||2||

ಊದುವ ಕಾಳೆಯದನರ್ಥಕವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವಆದರಿಸು ನಿನ್ನ ಲೆಂಕನ ಪ್ರತಿ ಲೆಂಕನಭೇದವೇತಕೆ ನಿನ್ನ ದಾಸ ನಾನು ಬಾಡದಾದಿ ಪ್ರಸನ್ನ ಕೇಶವನೆ ಎನಗಾದ ದುರ್ಮತಿಯ ಪರಿಹರಿಸು ಎಲೆ ದೇವ ||3||

Leave a Comment

Your email address will not be published. Required fields are marked *