ನಿನ್ನ ನಾನೇನೆಂದೆನೊ – ರಂಗಯ್ಯ

ನಿನ್ನ ನಾನೇನೆಂದೆನೊ – ರಂಗಯ್ಯ ರಂಗನಿನ್ನ ನಾನೇಂದೆನೊ
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ

ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ – ಮಣ್ಣನಗೆದುಬೇರ ಮೆದ್ದವನೆಂದೆನೆ – ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ||1||

ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿಪರಶು ಪಿಡಿದು ಕ್ಷತ್ರಿಯರ ಸವರಿಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯಚರಿತ ಯಾದವ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ – ಹೆತ್ತ ತಾಯಶಿರವ ತರಿದನೆಂದೆನೆ – ವನವಾಸಕೆಭರದಿ ಚರಿಸಿದನೆಂದೆನೆ – ಪೂತನಿಯನುಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ||2||

ಚಿತ್ತಜಕೋಟಿ ಲಾವಣ್ಯ ಮುಪ್ಪುರದಉತ್ತಮಸ್ತ್ರೀಯರ ವ್ರತವಳಿದುಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದಹತ್ತವತಾರದ ಹರಿಯೆಂದೆನಲ್ಲದೆಬತ್ತಲೆ ನಿಂತವನೆಂದೆನೆ – ತೇಜಿಯನೇರಿಒತ್ತಿ ನಡೆದವನೆಂದೆನೆ – ಬಾರಿಬಾರಿಗೆಸತ್ತು ಹುಟ್ಟುವನೆಂದೆನೆ – ಆದಿಕೇಶವಭಕ್ತವತ್ಸಲನೆಂದು ಪೊಗಳಿದೆನಲ್ಲದೆ ||3||

Leave a Comment

Your email address will not be published. Required fields are marked *