ನಿನ್ನನೆ ಪಾಡುವೆ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆ||

ನಿನ್ನ ಕಾಲ ಪಿಡಿವೆ ನಿನ್ನ ಹಾರೈಸುವೆ
ನಿನ್ನ ತೊಂಡರಿಗೆ ಕೈಯ ಕೊಡುವೆ||

ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ
ಘನ್ನ ಪುರಂದರವಿಟ್ಠಲ ದೇವರದೇವ||

Leave a Comment

Your email address will not be published. Required fields are marked *