ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ
ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ
ಮಚ್ಚ್ಯಾವತಾರ ನೀನಾದರೆ – ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ – ಆಕೆನಿಚ್ಚ ಶಂಖಕಂಠಳಾದಳಯ್ಯ ||1||
ನೀಲವರ್ಣ ನೀನಾದರೆ – ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ – ಆಕೆಬಾಲ ಕಮಲಮುಖಿಯಾದಳಯ್ಯ||2||
ಬೆಟ್ಟವ ನೀನೊಂದು ಪೊತ್ತರೆ – ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ – ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ||3||
ಗಜರಾಜವರದ ನೀನಾದರೆ – ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ – ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ ||4||
ಈ ಪರಿಯೊಳು ನೀನು ಜನಿಸಿದೆ – ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ – ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ||5||