ನಾರಾಯಣೆನು ಮನವೆ ನರಹರಿಯ ನೆನೆ ಮನವೆ

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು

ಗುರುವಿನುಪದೇಶದಲ್ಲಿ ಪರಮ ರಹಸ್ಯವನರಿತುಮರೆಯದಲೆ ಅಲ್ಲಿ ಅಧಿಕಾರಿಯಾಗೊತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸುಪರಮ ವೈಷ್ಣವರ ಪಂಕ್ತಿಯ ಸೇರು ಮನವೆ ||1||

ಕುಲಛಲಂಗಳ ಬಿಟ್ಟು ಬಲು ಪಾಶಗಳ ತರಿದುಹಲವು ಕೊಂಬೆಗೆ ನೀನು ಹರಿದಾಡದೆಸುಲಭದಲಿ ಶ್ರೀಪಾದತೀರ್ಥ ಪ್ರಸಾದವನುನೆಲೆಗೊಳಿಸಿ ಆತ್ಮನಿಗೆ ನಿತ್ಯ ಸುಖಿಯಾಗೋ ||2||

ಶೇಷವಿಶೇಷವೆಂದೆನಿಪ ಪರಮಾರ್ಥದೊಳುಮೀಸಲಳಿಯದ ಪಾಪರಹಿತನಾಗುವಾಸಾಧಿಪತಿ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸ ನೀನಾಗೊ ||3||

Leave a Comment

Your email address will not be published. Required fields are marked *