ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ

ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ

ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ ||1||

ತತ್ತಿ ಹಕ್ಕಿಯ ಪೊತ್ತೊ ಹಕ್ಕಿ ತತ್ತಿಯ ಪೊತ್ತೊತತ್ತಿಯು ಮುಂದೊ ಹಕ್ಕಿಯು ಮುಂದೊ ಸ್ವಾಮಿ ||2||

ಬೀಜ ವೃಕ್ಷವ ಪೊತ್ತೊ ವೃಕ್ಷ ಬೀಜವ ಪೊತ್ತೊಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ ||3||

ಗಂಡ ಹೆಂಡಿರ ಪೊತ್ತೊ ಹೆಂಡಿರು ಗಂಡನ ಪೊತ್ತೊಗಂಡನು ಮುಂದೊ ಹೆಂಡಿರು ಮುಂದೊ ಸ್ವಾಮಿ||4||

ಕನಕನು ಹೇಳಿದ ಬೆಡಗಿದು ಕಂಡವರೆಲ್ಲರುಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರಿ ||5||

Leave a Comment

Your email address will not be published. Required fields are marked *