ನಾನಿನ್ನೊಳನ್ಯ ಬೇಡುವುದಿಲ್ಲ|
ಹೃದಯಕಮಲದೊಳು ನಿಂದಿರು ಹರಿಯೆ||
ಶಿರ ನಿನ್ನ ಚರಣಕೆ ಎರಗಲಿ| ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಿಯೆ|
ಕರ್ಣ ಗೀತಂಗಳ ಕೇಳಲಿ| ನಿನ್ನ
ನಿರ್ಮಾಲ್ಯವ ನಾಸಘ್ರಾಣಿಸಲಿ||
ನಾಲಿಗೆ ನಿನ್ನನು ಕೊಂಡಾಡಲಿ|
ಕರಗಳೆರಡು ನಿನ್ನನರ್ಚಿಸಲಿ|
ಚರಣ ತೀರ್ಥಯಾತ್ರೆ ಮಾಡಲಿ| ಎನ್ನ
ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ||
ಬುದ್ಧಿಯು ನಿನ್ನೊಳು ಬೆರೆಯಲಿ ಹರಿಯೆ|
ಚಿತ್ತ ನಿನ್ನೊಳು ಸ್ಥಿರವಾಗಲಿ|
ಭಕ್ತಜನರಸಂಗವಾಗಲಿ|ಪುರಂದರ-
ವಿಟ್ಠಲನೆ ಇಷ್ಟೇ ದಯಮಾಡೊ
—ಪುರಂದರದಾಸ