ನನ್ನ ಜನನಿ ನಿನ್ನ ಜನನಿ

ಅಲೈಯಾ ಬಿಲಾವಲ್ – ಏಕತಾಲ

ನನ್ನ ಜನನಿ ನಿನ್ನ ಜನನಿ

ಎಂಬ ಭೇದ ಸಲ್ಲದು|

ಅವಳು ಜಗದ ಕೋಟಿಕೋಟಿ

ಜೀವಜನ್ಮದಾತೆಯು||

 

ತಾಯೆ ನಿನ್ನ ಸಮ್ಮುಖದಲ್ಲಿ

ನಾವು ಕೂಡಿ ನಲಿವೆವು|

ನಿನ್ನ ವಾತ್ಸಲ್ಯಸುಧೆಯ

ನೀಡಿ ಎಮ್ಮ ಕಾಪಿಡು||

 

ಅಮ್ಮಾ ಎಂದು ಎಷ್ಟು ಬಾರಿ

ಕರೆದರದೂ ಸಾಲದು!

ತಾಯ ಮಧುರ ಋಣವ ನಾವು

ತೀರಿಸಲೇ ಆರೆವು||

 

ಮೈಮನಗಳ ಮರೆಸುವಂಥ

ದಿವ್ಯನಾಮವಿಲ್ಲಿದೆ!

ಅಮ್ಮಾ ಎಂಬ ನಾಮಸುಧೆಗೆ

ಜಗದಿ ಸಾಟಿ ಎಲ್ಲಿದೆ||

 

ಪರಬ್ರಹ್ಮ ಆದಿಶಕ್ತಿ

ಎನಿತೊ ನಾಮ ಅವಳಿಗೆ

ಅಮ್ಮಾ ಎಂಬ ಒಂದೆ ನಾಮ

ಸಾಕು ನಮ್ಮ ಪಾಲಿಗೆ||

 

– ಸ್ವಾಮಿ ಪುರುಷೋತ್ತಮಾನಂದ

Leave a Comment

Your email address will not be published. Required fields are marked *