ನದನದಿಗಳನು ಸ್ಮರಿಸಿರೋ

ನದನದಿಗಳನು ಸ್ಮರಿಸಿರೋ
ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ
ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ
ಪದವಿಗೆ ಸೋಪಾನದಂತಾಗುವದು ಶ್ರೀ
ಪದುಮನಾಭನು ವೊಲಿವನು

ಸುರ ತರಂಗಿಣಿ ಸಿಂಧು ಕುಶವರ್ತಳೆ ಸೀತ
ಮರುಧೃತಿ ಹೇಮವತಿ ನೇಮಿ ನೇತ್ರವತಿ
ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ
ಗರುಡ ಸಾಧರ್ಮಾ
ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ
ವರದಕಾಗಿಣಿ ಕೃಷ್ಣವೇಣಿ ವೇದವತಿ
ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ
ಜರಫಣಿ ಭೀಮರಥಿನೀ ||1||

ವಾರುಣಿ ವರುಣ ಅಸಿಭುವನಾಶಿ ಕುಮಾರ
ಧಾರಿ ತುಂಗಾ ಭದ್ರಿಗಣಪತಿ ಶತಭಾಗ
ನಾರದಿ ಉಭಯಪಿನಾಕಿ ಚಿತ್ರವತೀ
ಮೂರು ಲೋಕೋದ್ಭವ ಭವಾನೀ
ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ
ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ
ವಾರಿಜಾಪ್ತಾವತಿ ಸುರ್ವಣ ಮುಖರೀ
ವಿಸ್ತಾರ ಹಾಟಕ ಅತ್ರಿಣೀ ||2||

ಮಲಾಪಹಾರಿ ತ್ರಿಪತಿ ಪೂರ್ಣ ಕುಮದ್ವತಿ
ಸುಲಭ ಮಂದಾಕಿನಿ ಕೌಮೋದಕಿ ಶಾಂತಿ
ಫಲ್ಗುಣೀ ವೇಗವತಿ ಅರ್ಜುನ ಮಹೇಶ್ವರಿ
ಕಪಿಲ ಚಂದ್ರಭಾಗ ಅರುಣೀ
ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ
ಅಳಕನಂದನ ಅಮಲವತಿ ಭೀಮಸಂಭೆ
ಸಿ ತಾಂಬ್ರ ಪರ್ಣಿಯು ಜಯ ಮಂ
ಗಳೇ ಸತಿ ಸತ್ಯವತಿ ವೈಷ್ಣವೀ ||3||

ಕನಿಕ ಶುಕ್ಲಾವತೀ ಬಾಹುನದಿಗೋವಿಂದ
ಸುತಿ ಕಲ್ಯಾಣ ಕೌಸಿಕಾ
ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ
ಅನುಸಿಂಧು ಐರಾವತಿ
ಋಣ ವಿಮೋಚನ ಮಯೂರ ಸಂಭವೆ
ಘನಸ್ವಾಮಿ ಚಂದಿರಾ ನಿತ್ಯ ಪುಷ್ಕರಣಿ ಪಯೋ
ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು ||4||

ಅರುಣೋದಯಲೆದ್ದು ಧರೆಯೊಳುಗಳ್ಳ ಬಲು
ಸರಿತಗಳ ನೆನೆದು ಪುಳಕೋತ್ಸವದಲಿ
ಪರಮ ಧನ್ಯರಾಗಿ ಪಾಪಗಳ ಪೋಗಾಡಿ
ನಿರುತ ಮಾರುತ ಮತದಲೀ
ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು
ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ
ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ
ಕರಣದಲಿ ತಿಳಿದು ನಿತ್ಯಾ||5||

Leave a Comment

Your email address will not be published. Required fields are marked *