ನಂಬಿದೆ ನಿನ್ನ ನೀರಜಪಾದ

ನಂಬಿದೆ ನಿನ್ನ ನೀರಜಪಾದ |
ಇಂಬಿನಲ್ಲಿಟ್ಟು ಸಲಹೊ ಪ್ರಸಾದ
ಅಂಬರೀಷನ ಶಾಪ ಹಿಂಗಿಸಿ ಕಳೆದ ದ- |
ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ

ಉಗ್ರನ್ನ ಖಳವಂಚಿಸಿ ತನ್ನ ಕ- |
ರಾಗ್ರವಾ ಶಿರದಲ್ಲಿ ಇಡಬರಲು ||
ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ |
ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು||1||
\
ಕಾಲದೂತರು ಅಜಾಮಿಳನೆಳೆಯಲು |
ನಾಲಿಗೆಯಿಂದ ನಾರಗÀನೆನ್ನಲು ||
ಆಲಸ್ಯ ಮಾಡದೆ ನಿನ್ನ ದೂತರನಟ್ಟಿ |
ಓಲಗ ವೈಕುಂಠವಿತ್ತ ಭಾಂದವನೆಂದು ||2||

ಭೂತಳದೊಳು ನಿನ್ನನು ಪೋಲುವ |
ದಾತರ ನಾನೆಲ್ಲಿ ಕಾಣೆ ಶ್ವೇತವಾಹನ ||
ಮಸ್ತಕವನು ಉಳುಹಿದ ದಾತ |
ವಿಜಯವಿಠ್ಠಲನಹುದೆಂದು ದೃಢವಾಗಿ ||3||

Leave a Comment

Your email address will not be published. Required fields are marked *