ದೇವನೆ ಎನ್ನನು ಮರೆಯುವುದುಚಿತವೆ

ದೇವನೆ ಎನ್ನನು ಮರೆಯುವುದುಚಿತವೆ
ಸೇವೆಯ ಮಾಡುವ ಬಾಳನು ಸವೆಸಿಹೆ||

ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ||

ಕೊರಗುತ ಹೃದಯದಿ ಪರಿಪರಿಯಂದಲಿ
ಶಿರವನು ಬಾಗಿಸಿ ಬೇಡುತಲಿರುವೆ||

ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಶನ ನೀಡೋ||

                                       —ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *