ದೇವಕಿನಂದನ ಹರಿ ವಾಸುದೇವ||
ಕಂಸಮರ್ದನ ಹರಿ ಕೌಸ್ತುಭಾಭರಣ
ಹಂಸವಾಹನಮುಖವಂದಿತಚರಣ||
ಶಂಖಚಕ್ರಧರ ಶ್ರೀಗೋವಿಂದ
ಪಂಕಜಲೋಚನ ಪೂರ್ಣಾನಂದ|
ಮಕರಕುಂಡಲಧರ ಶತರವಿಭಾಸ
ರುಕ್ಮಿಣಿವಲ್ಲಭ ಸಕಲಲೋಕೇಶ|
ನಿಗಮೋದ್ಧಾರ ನವನೀತಚೋರ
ಖಗಪತಿವಾಹನ ಜಗದಾಧಾರ|
ವರವೇಲಾಪುರ ಚನ್ನಪ್ರಸನ್ನ
ಪುರಂದರವಿಟ್ಠಲ ಸದ್ಗುಣಪೂರ್ಣ||
—ಪುರಂದರದಾಸ