ದರುಶನ ನೀಡೆನಗೆ ತಾಯಿ|
ಶಾರದೇಶ್ವರಿ ವರದೇ ಶುಭದೇ||
ದೀನೋದ್ಧರಣಕೆ ನಿನ್ನವತರಣ|
ನನಗೇ ಏಕೀ ದೂರೀಕರಣ||
ದಿನಗಳು ಉರುಳಲು ಆಯುರ್ನಾಶ|
ನನ್ನಿಯ ತ್ಯಜಿಸಲು ತಾಪದ ಪಾಶ||
ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ|
ನಿನ್ನಯ ಪಾದದಿ ಶರಣವೆ ಸಾಲದೆ||
ಎಂದಾಗುವುದು ಜನನಿ ಕೃಪೆಯು|
ಅಂದೇ ನನಗೆ ವಿಮೋಚನೆಯು||
—ಸ್ವಾಮಿ ಹರ್ಷಾನಂದ