ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು
ರಕ್ಷಿಪರಾರು ತ್ರಿಭುವನದೊಳು ಹೇ||

ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ
ನೀಯೆನ್ನ ತ್ಯಜಿಸಲು ಗತಿ ಯಾರಿನ್ನು||

ಮಾನುಷ ಜನ್ಮವ ಮುಕ್ತಿಯ ಆಸೆಯ
ಶ್ರೀಗುರುಪಾದವ ಕರುಣಿಸಿದೆ ತಾಯಿ|
ಎನ್ನಯ ದೋಣಿಯ ನಿನ್ನಯ ದಡದಲಿ
ಮುಳುಗಿಸಿದರೇ ನೀನೇ ಕಾಯುವರಾರು
ಕಾಯುವರಾರು ಜಗಜ್ಜನನಿ||

                           —ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *