ತವ ಕೃಪೆ ಬೆಳಗಲಿ

ತವ ಕೃಪೆ ಬೆಳಗಲಿ  ಭವಭ್ರಮೆ ಕಳೆಯಲಿ
ಶಿವೆ ಶ್ರೀಶಾರದೆ ತವಕದಿ ಮೊರೆಯುವೆ||

ಇಂದು ಸುವಿಮಲೆ ವಂದಿತ ಪದತಲೆ |
ಕುಂದದ ಪ್ರೇಮದ ಮಂದಾಕಿನಿಯೆ||

ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ|
ಯೋಗೀಂದ್ರಾರ್ಚಿತೆ ಯೋಗಪ್ರದಾತೆ||

ನಿನ್ನಡಿದಾವರೆ ಎನ್ನಯ ಆಸರೆ|
ಮನ್ನಿಸು ದಾಸನ ಬಿನ್ನಹ ಮಾತೆ||

—-ಸ್ವಾಮಿ ಶಾಸ್ತ್ರಾನಂದ

Leave a Comment

Your email address will not be published. Required fields are marked *