ತನುವ ನೀರೊಳಗದ್ದಿ

ತನುವ ನೀರೊಳಗದ್ದಿ ಫಲವೇನು
ಮನದಲಿ ದೃಢಭಕ್ತಿಯಿಲ್ಲದ ಮನುಜನು||

ದಾನ ಧರ್ಮಂಗಳ ಮಾಡುವುದೆ ಸ್ನಾನ
ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ
ಹೀನ ಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನೋಡುವುದೆ ಸ್ನಾನ||

ಗುರುಗಳ ಪಾದದರ್ಶನವೆ ಸ್ನಾನ
ಹಿರಿಯರ ದರ್ಶನ ಮಾಡುವುದೆ ಸ್ನಾನ
ಕರೆದು ಅನ್ನವನಿಕ್ಕುವುದೊಂದು ಸ್ನಾನ
ನರಹರಿ ಚರಣವ ನಂಬುವುದೆ ಸ್ನಾನ||

ದುಷ್ಚರ ಸಂಗವ ಬಿಡುವುದೆ ಸ್ನಾನ
ಶಿಷ್ಚರ ಸಹವಾಸ ಮಾಡುವುದೆ ಸ್ನಾನ
ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ
ಮುಟ್ಟಿ ಭಜಿಸಿದರೆ ವಿರಜಾ ಸ್ನಾನ||

                                           —ಪುರಂದರದಾಸ

Leave a Comment

Your email address will not be published. Required fields are marked *