ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ
ಭುವನಮಂಗಲಕಾರಿ|
ಚಿರಸಮಾಧಿಯ ಗಿರಿಶಿಖರದಿಂ
ನರರ ಸೇವೆಗೆ ಇಳಿದ ನರವರ||

ಸುಪ್ತದೈವರೆ ಏಳಿರೇಳಿ
ಲುಪ್ತಪದವಿಯ ಮರಳಿ ತಾಳಿ|
ಸಪ್ತ ಭುವಿಗಳ ಆಳಿರೆನುತ
ದೀಪ್ತವಾಣಿಯ ಜಗದಿ ಮೊಳಗಿಹೆ||

ವಿಶ್ವವ್ಯಾಪಕ ಪ್ರೇಮಮೂರ್ತಿಯೇ
ವಿಶ್ವದ್ಯೋತಕ ಪರಮಜ್ಞಾನಿಯೇ|

ವಿಶ್ವಮುಕ್ತಿ ಸಮರ್ಪಿತಾತ್ಮನೆ
ವಿಶ್ವವಂದ್ಯನೆ ಜಯತು ಜಯತು||

                               —ಸ್ವಾಮಿ ಶಾಸ್ತ್ರಾನಂದ

Leave a Comment

Your email address will not be published. Required fields are marked *