ಜಯ ದೇವ ದೇವ ಕರುಣಾವತಾರ

ಪೂರ್ವಿ – ತ್ರಿತಾಲ

ಜಯ ದೇವ ದೇವ ಕರುಣಾವತಾರ

ಜಗದೇಕಗಮ್ಯ ಸಂಸಾರಸಾರ||

ಮಾಯಾವಿಹೀನ ಸಚ್ಚಿತ್ ಸ್ವರೂಪ

ಲೀಲಾವಿಲಾಸ-ಧೃತಿವಿವಿಧರೂಪ|

ರಾಜಾಧಿರಾಜ ಭುವನೈಕರೂಪ

ಭೂತಾಧಿವಾಸ ಭವಕರ್ಣಧಾರ||

ಚೈತನ್ಯನಾಥ ಸ್ವಾನಂದಕಂದ

ಭವರೋಗವೈದ್ಯ ಜಿತ ನಿಖಿಲಬಂಧ।

ಅತುಲಪ್ರತಾಪ ರಿಪುದಲಕರಾಲ

ಸಾಧಕವಿಶುದ್ಧಮಾನಸವಿಹಾರ||

ವಿಶ್ವಪ್ರಣಮ್ಯ ತ್ರಯತಾಪನಾಶ

ಕಾಮಾದಿದೋಷಹರ ಚಿತ್ಪಕಾಶ!

ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ

ಹೇ ರಾಮಕೃಷ್ಣ ಭವಭಯನಿವಾರ

– ಸ್ವಾಮಿ ವಾಗೀಶ್ವರಾನಂದ

Leave a Comment

Your email address will not be published. Required fields are marked *