ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ

ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1||

ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2||

ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ ||3||

Leave a Comment

Your email address will not be published. Required fields are marked *