ಜಯ ಜಗದಂಬ ಮಾ ಜನನೀ ಶ್ಯಾಮಾ
ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ||
ಮಮ ಹೃದಯಕಮಲದಿ ವಾಸಿಸು ಮುದದಿ
ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ|
ನಿನ್ನ ಕಂದ ನಾನು ಕರೆಯುತಿಹೆ
ಲಾಲಿಸೆನ್ನ ಹೇ ರಮಾ|
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||
ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ
ಪರಾಭಕ್ತಿಗಮ್ಯೆ ನೀನು ಭವತಾರಿಣೀ|
ನಿನ್ನ ನಂಬಿ ಕರೆವೆ ನಮನಗೈವೆ
ನಲಿದು ಬಾರೆ ಹೇ ರಮಾ|
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||