ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ ಪಾರ್ವತಿ|
ರಮಣ ನಿನಗೆ ನಮೋ ನಮೋ ನಮೋ||

ಸುಂದರ ಮೃಗಧರ ಪಿನಾಕ ಧನುಕರ|
ಗಂಗಾಶಿರ ಗಜಚರ್ಮಾಂಬರಧರ||

ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ|
ಧರಿಸಿದ ಪರಮ ವೈಷ್ಣವ ನೀನೇ||

ಗರುಡಗಮನ ಶ್ರೀ ಪುರಂದರ ವಿಟ್ಠಲನ|
ಪ್ರಾಣಪ್ರಿಯನೇ ನಮೋ ನಮೋ||

                                            —ಪುರಂದರದಾಸ

Leave a Comment

Your email address will not be published. Required fields are marked *