ಗೋವಿಂದ ಗೋವಿಂದ ಅತಿ ಆನಂದ
ಸಕಲ ಸಾಧನ ನಿನ್ನಾನಂದ||
ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ|
ನಿರ್ಮಲಾತ್ಮಕನಾಗಿ ಇರುವುದೇ ಆನಂದ||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ|
ಈ ಪರಿ ಮಹಿಮೆಯ ತಿಳಿಯೋದೆ ಆನಂದ||
ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ|
ಹಿಂಗದೆ ದಾಸರ ಸಲಹೋದೆ ಆನಂದ||
—ಪುರಂದರದಾಸ
ಗೋವಿಂದ ಗೋವಿಂದ ಅತಿ ಆನಂದ
ಸಕಲ ಸಾಧನ ನಿನ್ನಾನಂದ||
ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ|
ನಿರ್ಮಲಾತ್ಮಕನಾಗಿ ಇರುವುದೇ ಆನಂದ||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ|
ಈ ಪರಿ ಮಹಿಮೆಯ ತಿಳಿಯೋದೆ ಆನಂದ||
ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ|
ಹಿಂಗದೆ ದಾಸರ ಸಲಹೋದೆ ಆನಂದ||
—ಪುರಂದರದಾಸ