ಕೇಶವನೊಲುಮೆಯು ಆಗುವ ತನಕ ಹರಿ

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ
ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳು

ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ ||1||

ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ e್ಞÁನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ||2||

ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ ||3||

ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ ||4||

ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ||5||

ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ ||6||

ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ ||7||

Leave a Comment

Your email address will not be published. Required fields are marked *