ಕೇಳು ಮನವೆ ಸುಜನನಾಗಿ

ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ
ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು
ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸು ಜ್ಞಾನ

ವಳಿಸು ಪಾಪಕಲಿಯಾ ಬೆಳಿಸು ಘಳಿಸು
ತಾಮಸ ಸುಳಿಸು ಮಾರ್ಗ
ಬಲಿಸು ಧ್ಯಾನವ ಉಳಿಸು ಮನವ
ಬೆಳಿಸು ಚೆನ್ನಾಗಿ ಗೆಲಿಸು ವ್ರತವ
ಚಲಿಸು ಯಾತ್ರೆಯ ಇಳಿಸು ಮಮತೆ
ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ ||1||

ನೋಡು ಕಣ್ಣಲಿ ಮಾಡು ಸೇವೆಯ ಪಾಡಿ
ಕೀರ್ತನೆ ಕಾಡು ರಂಗನ
ಬೇಡು ದೈನದಿ ನೀಡು ಹಸ್ತವ
ಬಾಡು ನಿನ್ನೊಳಗಾಡು
ತಾಡುತಾ ಕೇಡು ಒದೆದು ಬಿಡು ನೆಚ್ಚ
ದೀಡ್ಯಾಡ್ಯೋ ಕಾಯವ ಗೂಢದ ಮಾತಾಡು ಕಲಾಪ
ಬೇಡರಟ್ಟಲು ಮೋಡು ನಿಲ್ಲದೆ ಪಾಡು ಪಂಥವಾ ||2||

ಕರಿಯೊ ಹರಿಯಾ ಬೆರಿಯೆ ಸಂಗಡ
ನೆರಿಯೊ ವೊಡನೆ ಸುರಿಯೊ ನಾಮವ
ಅರಿಯೊ ಮಹಿಮೆ ಮರಿಯೊ ವ್ಯಾಕುಲ
ಮೆರಿಯೊ ಗುಪ್ತದಿ ಜರಿಯೊ ಹೀನರಾ ಸರಿಯೊ ಮಿರಲು
ಗುರಿಯೊ ತಮಕ್ಕೆ ಸರಿಯೆ ಲಾಲಿಸು ಧರಿಯೊಳಗೆ ನೀ
ಮರಿಯೊ ಯೆನಿಸಿ ಹರಿಯೊಲಿದರೆ ದೊರಿಯೊ
ವಿಜಯವಿಠ್ಠಲನೆಂದು ||3||

Leave a Comment

Your email address will not be published. Required fields are marked *