ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದುನೆಂಪು ಬಲ್ಲವರು ಪೇಳಿ
ಹಂಪೆಯ ವಿರೂಪಾಕ್ಷ ಲಿಂಗನಲ್ಲಿಝಂಪೆಯನಾಡುತಿಹುದು
ಆರು ತಲೆ ಹದಿನಾರು ಕಣ್ಣುಗಳುಂಟುಮೂರು ಮೂರು ನಾಲಗೆಬೇರೆ ಹನ್ನೆರಡು ಕಣ್ಣು ಕಿವಿಗಳುಂಟುಸೇರಿತು ತೆಂಕಲಾಗೆ ||1||
ಬಲೆಯ ಬೀಸಿದರು ಸಿಕ್ಕದಾ ಮೃಗಜಲದೊಳು ತಾ ನಿಲ್ಲದುನೆಲನ ಮೇಲಿರುವುದು ನಿಂತರೆ ಸಾವುದು ಕುಲದೊಳಗಾಡುತಿಹುದು ||2||
ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆಬೇರೆ ಬೇರೆನಬಹುದುಚೆನ್ನ ಕೇಶವನಲ್ಲಿ ಕೃಪೆಯುಂಟಾದರೆಅಲ್ಲುಂಟು ಇಲ್ಲಿಲ್ಲವೆ ||3||