ಕೃಷ್ಣ ಎನಗೆ ಬಂದರಿಷ್ಟವ

ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ
ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ

ನಿರ್ದೋಷ ಗುಣವಾರುಧಿ
ನಿರ್ಧಾರವಾಗಿ ನುಡಿವೆ
ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು ||1||

ಅಜ ಭವಾದ್ಯರು ನಿನ್ನ
ಭಜಿಪರಾರು ದೋಷ
ವ್ರಜದ ಮಾನವ ತಿಳಿದು ಭಜಿಸಬಲ್ಲೆನೆ ದೇವಾ ||2||

ಮಧ್ವ ಸರೋವರದಲ್ಲಿ
ಇದ್ದು ಪೂಜೆಯಗೊಂಬ
ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ ||3||

Leave a Comment

Your email address will not be published. Required fields are marked *