ಕಾಯದೊಳಗೆ ಅಕಾಯವಾಯಿತ್ತು.

ಕಾಯದೊಳಗೆ ಅಕಾಯವಾಯಿತ್ತು.
ಜೀವದೊಳಗೆ ನಿರ್ಜೀವವಾಯಿತ್ತು.
ಭಾವದೊಳಗೆ ನಿರ್ಭಾವವಾಯಿತ್ತು.
ಎನ್ನ ಮನದೊಳಗೆ ಘನ ನೆನಹಾಯಿತ್ತು.
ಎನ್ನ ತಲೆ ಮೊಲೆಗಳ ನೋಡಿ ಸಲಹಿದಿರಾಗಿ ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು.

Leave a Comment

Your email address will not be published. Required fields are marked *