ಕಳೆಯಬೇಕೆ ದಿನಗಳೆಲ್ಲ
ವಿಫಲವಾಗಿ ಹೋಗಿಯೇ|
ಹಗಲು ಇರುಳು ಆಶಾಪಥವ
ಕಾಯುತಿಹೆನು ಸ್ವಾಮಿಯೇ||
ತ್ರಿಭುವನಗಳ ನಾಥ ನೀನು
ಭಿಕಾರಿ ಅನಾಥ ನಾನು|
ಕರೆಯಲೆಂತು ಮಮ ಹೃದಯದಿ
ನೆಲೆಸು ಎಂದು ಹೀಗೆಯೇ||
ಹೃದಯ ಕುಟಿಯ ದ್ವಾರಗಳನು
ಅನವರತವು ತೆರೆದಿರುವೆನು|
ಕೃಪೆಯ ತೋರಿ ಬಂದು ನೀಡು
ಶಾಂತಿಯನ್ನು ಸ್ವಾಮಿಯೇ||
ಕಳೆಯಬೇಕೆ ದಿನಗಳೆಲ್ಲ
ವಿಫಲವಾಗಿ ಹೋಗಿಯೇ|
ಹಗಲು ಇರುಳು ಆಶಾಪಥವ
ಕಾಯುತಿಹೆನು ಸ್ವಾಮಿಯೇ||
ತ್ರಿಭುವನಗಳ ನಾಥ ನೀನು
ಭಿಕಾರಿ ಅನಾಥ ನಾನು|
ಕರೆಯಲೆಂತು ಮಮ ಹೃದಯದಿ
ನೆಲೆಸು ಎಂದು ಹೀಗೆಯೇ||
ಹೃದಯ ಕುಟಿಯ ದ್ವಾರಗಳನು
ಅನವರತವು ತೆರೆದಿರುವೆನು|
ಕೃಪೆಯ ತೋರಿ ಬಂದು ನೀಡು
ಶಾಂತಿಯನ್ನು ಸ್ವಾಮಿಯೇ||