ಕರುಣಿಸೆನ್ನ ಹರಿಯ ರಮಣಿ

ಕರುಣಿಸೆನ್ನ ಹರಿಯ ರಮಣಿ
ವರದ ಲಕುಮಿದೇವಿಯೆ
ಕಮಲಭಾಣಜನನಿ ದಿವ್ಯ-
ಕಮಲಪಾಣಿ ರಾಜಿತೇ||

ಸಕಲನಿಗಮವಿನುತಚರಣೇ
ಸಕಲಭಾಗ್ಯದಾಯಿನಿ
ಸಕನಮೌನಿನಿಕರವಂದ್ಯ
ಸಕಲಲೋಕನಾಯಕಿ||

ಶರಧಿತನುಜೇ ಮಂಗಳಾಂಗಿ
ಪರಮಸೌಖ್ಯದಾಯಿನಿ
ವರದವೆಂಕಟಾದ್ರಿವರನ
ಪುರನಿವಾಸೇ ಮೋಹಿನಿ||

Leave a Comment

Your email address will not be published. Required fields are marked *