ಕಂಡೆ ಶ್ರೀಹರಿ ದಿವ್ಯಪಾದ

ಕಂಡೆ ಶ್ರೀಹರಿ ದಿವ್ಯಪಾದ – ಬ್ರ-ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ

ಸಿರಿಯು ಸೇವಿಪ ವರ ಪಾದ – ನಮ್ಮಗರುಡನಿಂದ ಹೊತ್ತು ತಿರುಗುವ ಪಾದತರಳ ಧ್ರುವನ ಕಾಯ್ದ ಪಾದ – ಮುನಿಸುರರು ನಮಿಸುವ ಲಲಿತ ಪಾದ 1

ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ2

ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ3

Leave a Comment

Your email address will not be published. Required fields are marked *