ಏನು ನಿರುಪಮ ಸೊಬಗು, ಓಹೋ
ಎಂಥ ಚೆಲುವಿನ ಮೋಹನ!
ನನ್ನ ಹೃದಯದ ಮೂರ್ತಿ ಬಂದನು
ಎದೆಯ ಗುಡಿಸಲಿಗೀದಿನ!
ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ
ಹತ್ತು ಕಡೆಗೂ ಸುಮ್ಮನೆ!
ಯಾವ ಸಂಪದವನ್ನು ಸುರಿಯಲಿ
ಹೇಳು ನಿನ್ನೀ ಪದದೆಡೆ?
ನನ್ನ ಹರಣವೆ ಶರಣು ನಿನಗೆ,
ನನ್ನ ಆತ್ಮವೆ ನಿನ್ನದು ;
ಮತ್ತೆ ಏನನು ನೀಡಲಯ್ಯಾ?-
ನನ್ನದೆಲ್ಲವು ನಿನ್ನದು!
—-ವಚನವೇದ
Pls send the lyrics in English