ಏನಿದೆತ್ತಣ ಬಯಕೆ ಎಲೊ

ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ

ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು ||1||

ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು ||2||

ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ ||3||

Leave a Comment

Your email address will not be published. Required fields are marked *