ಎತ್ತ ಹೋದರು ಸುತ್ತಲೆಲ್ಲೂ

ಎತ್ತ ಹೋದರು ಸುತ್ತಲೆಲ್ಲೂ
ಆರಿಗಾರೂ ಇಲ್ಲ ಜಗದೊಳು
ಎಂಬುದನು ನೀ ನೆನಪಿಡು|
ಮಾಯೆಯೊಡ್ಡಿದ ಬಲೆಯೊಳಿದ್ದರು
ತಾಯ ಪಾದದಿ ಮನವಿಡು||

ಒಂದು ದಿನವೊ ಎರಡು ದಿನವೊ
“ಸ್ವಾಮಿ, ಬುದ್ಧೀ” ಎಂದು ಜನಗಳು
ಗೌರವದಿ ಬಳಿ ಸುಳಿವರು|
ಮೃತ್ಯು ಬಂದೆಳೆವಾಗ ನಿನ್ನನು
ಎಲ್ಲರೂ ಹಿಂದುಳಿವರು||

ಯಾವ ಪ್ರಿಯತಮೆಯೊಲವಿಗಾಗಿಯೆ
ಹಗಲು ಇರುಳೂ ಜೀವ ತೇದೆಯೊ
ಬಾರಳವಳೂ ಜೀವ ತೇದೆಯೊ
ಬಾರಳನಳೂ ಜೊತೆಯೊಳು|
ನೀನು ಸಾಯಲು ನಿನ್ನ ಶವವನು
ಅಶುಭವೆಂದೇ ತಿಳಿವಳು||

                               —-ವಚನವೇದ

Leave a Comment

Your email address will not be published. Required fields are marked *