ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ
ಇಂದಿರೇಶ ಶ್ರೀ ಗೋವಿಂದ ಮುಕುಂದ||

ತಂದೆ ತಾಯಿ ನೀನೇ ಬಂಧು ಬಳಗ ನೀನೇ
ಎಂದು ಭಜಿಸುವಾ ಆನಂದ ಗೋವಿಂದ|
ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ
ನ್ಮರಿಸುವಾ ಸುಖ ಎಂದಿಗಾಹುದೋ||

ಅಜಭವಾದಿಗಳು ಆನಂದದಿಂದಲಿ
ಭಜಿಸಿ ಪಾಡುವಾ ನಿನ್ನ ಸುಖವು|
ದೀನವತ್ಸಲ ಶ್ರೀನಿಕೇತನಾ
ಮಾನದಿಂದ ನಿನ್ನ ಧ್ಯಾನವೇ ಸುಖವು||

ಭಯನಿವಾರಣ ಭಕ್ತವತ್ಸಲ
ವಿಜಯಸಾರಥಿ ವಿಜಯವಿಟ್ಠಲನೆ||

                                      —-ವಿಜಯದಾಸ

Leave a Comment

Your email address will not be published. Required fields are marked *