ಉತ್ತಿಷ್ಠತ ಜಾಗ್ರತ| ಮನುಜ||
ಗುರಿಯನು ಸೇರುವವರೆಗೂ| ನೀ
ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ||
ನಿನ್ನಯ ಗುರಿಯು ಆತ್ಮದರುಶನ
ನಿನ್ನೊಳಗೆಯೆ ಇದೆ ಆ ರತುನ|
ಬನ್ನಪಡುತ ಈ ಕ್ಷುದ್ರ ಜೀವನದಿ
ಇನ್ನು ತೊಳಲದಿರು ಮುನ್ನಡೆ ಸಖನೇ||
ಮಮತೆಯ ಈ ದೇಹವೆ ನೀನೆಂದು
ಭ್ರಮಿಸದಿರೈ ನೀ ಎಂದೆಂದೂ|
ಅಮರ ಆತ್ಮ ನೀ ಅಮೃತಪುತ್ರನೇ
ಅಮಲಾನಂದದಿ ಪರಿಪೂರ್ಣನು ನೀ||