ಈತನೇನೆ ನಿನ್ನ ಮಗನು
ಸೀತಾಪತಿ ರಘುನಾಥನೆಂಬವನು
ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು ||1||
ಆನೆವಾಹನ ಪಿತನ ತಾಯನಳೆದೋನುಭಾನುಸುತಗೆ ಶಾಪವಿತ್ತವನುಕಾನನ ಜನನಿಯ ಕೊಂದು ಪ್ರಿಯದಲಿ ನಿ-ಧಾನದಿ ಶರಧಿ ಶಯನ ಮಾಡಿದಾತನು|| 2||
ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ ||3||