ಈತನೀಗ ಭಾರತೀಶನು ತನ್ನ ಪ್ರೀತಿಸುವರ

ಈತನೀಗ ಭಾರತೀಶನು ತನ್ನ ಪ್ರೀತಿಸುವರ |
ಮನದ ಮಾತು ಸಲಿಸಿ ಮುಕುತಿ ಈವ
ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ |
ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ ||

ಮುರಿದು ಧರೆಗೆ ವರಿಸಿದಾತಾ ಅಪ
ಧುರದೊಳಕ್ಷನ ಹರಣವಳಿದು |
ಗುರುವರ್ಹತ್ತುಶಿರನ ಜರಿದು ||
ಸರ್ರನೆ ನಗರ ಉರುಪಿ ಮರಳಿ |
ಹರಿಯ ಚರಣಕ್ಕೆರಗಿದಾತಾ ||1||

ಕುರುನಿಕರ ಕರುಬಿ ಬೊ-|
ಬ್ಬಿರಿದು ನಿಂದುರವಣಿಸಿ ಎದುರಾ-||
ದರಿಗಳ ಶಿರ ತರಿದು ತಳೋ-|
ದರಿಯ ಹರುಷಬಡಿಸಿದಾತಾ||2||

ಕರಿಯ ತೆರದಿ ದುಷ್ಟ ಸಂಕರನು |
ತಿರುಗಲವನ ಮುರಿದು ಮತ್ತೆ ||
ಮರುತಮತದ ಬಿರುದನೆತ್ತಿ – |
ಪರನೆ ವಿಜಯವಿಠ್ಠಲನೆಂದಾ ||3||

Leave a Comment

Your email address will not be published. Required fields are marked *