ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ – ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ – ವಿರಹ ಬೇಗೆಯಲಿಬೆಂದು ಸೈರಿಸಲಾರೆ – ಸಖಿ, ನೀನು ತಂದು ತೋರೆ
ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ

ಕಾಲಿಲ್ಲದಲೆ ಆಡಿದ – ವೇದ ತಂದಿತ್ತಕಾಲಿಲ್ಲದವನ ಪೊತ್ತ – ಅಮೃತ ತಂದಿತ್ತಕಾಲ ತೂಗಿ ನೋಡುತ್ತ – ಗಜಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ ||1||

ಎವೆಯಿಕ್ಕದೆ ನೋಡಿದ – ತಲೆಯ ತಗ್ಗಿಸಿಕವಲು ಕೋರೆದಾಡೆಯೊಳಾಡಿದ – ಕಂಬದಿ ಮೂಡಿದತವಕದಿಂದಲಿ ಬೇಡಿದ – ಭೂಭುಜರ ಕಡಿದಶಿವನ ಬಿಲ್ಲನು ಮುರಿದ _ ದೇವಕಿಕುವರ ನಗ್ನ ಹಯವನೇರಿದವಿವಿಧಾಬ್ಧಿಯೊಳಾಡಿ ಗಿರಿಧರಸವಿದು ಬೇರನು ಬಾಲಗೊಲಿದನಅವನಿ ಬೇಡಿ ಕೊಡಲಿ ಪಿಡಿದನಸವರಿ ದಶಶಿರನ ಬೆಣ್ಣೆ ಕದ್ದನಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ||2||

ವರ ಮತ್ಸ್ಯ ನಗಧರನ – ಸೂಕರ ಸಿಂಹನತಿರುಕ ತಾಯ್ತರಿದನ – ವರವಿತ್ತು ಶಬರಿಗೆತುರುಗಾಯ್ದ ನಿರ್ವಾಣನ – ಅಶ್ವಾರೂಢನಊರಿಲ್ಲದೆ ಹೊರೆ ಹೊತ್ತನ ಮುರುಢ ಕ್ರೂರನಉರವ ಸೀಳಿದ ವಿಪ್ರ ನೃಪರರಿಧರಣಿಜೆಯ ವರ ಕೃಷ್ಣ ಗಗನದಿಪುರವ ದಹಿಸಿದ ತೇಜಿರೂಢನಮೆರೆವ ಜಲಜ ಕೂರ್ಮ ವರಹನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರಶೌರಿ ಬುದ್ಧನ ತುರಗವೇರಿದ ಆದಿಕೇಶವನ||3||

Leave a Comment

Your email address will not be published. Required fields are marked *