ಆ ವೇಳೆಯಲಿ ಆರಾರ ಕಾಯ್ದೆಯೊ ದೇವ

ಆ ವೇಳೆಯಲಿ ಆರಾರ ಕಾಯ್ದೆಯೊ ದೇವಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು

ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆಶರಣನನು ಪಾಲಿಸುತೆ ಕಾಯ್ದೆಯಂತೆಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದುಕರುಣದಿಂದಲಿ ಕಾಯ್ದೆಯಂತೆ ಹರಿಯೆ ||1||

ಧರೆಗಧಿಕನಾಥನಾ ತೊಡೆಯನೇರಲು ಕಂಡುಜರೆಯಲಾ ಧ್ರುವನ ನೀ ಕಾಯ್ದೆಯಂತೆದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ ||2||

ಅಂದು ರಾವಣ ವಿಭೀಷಣನ ನೂಕಲು ಕಂಡುಇಂದಿರಾರಮಣ ನೀ ಕಾಯ್ದೆಯಂತೆಮಂದರೋದ್ಧರ ಮಧುಸೂದನ ಮಾಧವಗೋ-ವಿಂದ ರಕ್ಷಿಸು ಬಾಡದಾದಿಕೇಶವರಾಯ ||3||

Leave a Comment

Your email address will not be published. Required fields are marked *