ಆವ ಕರ್ಮವೊ ಇದು ಆವ ಧರ್ಮವೊ

ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ

ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ||1||

ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು|| 2||

ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ|| 3||

ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ||4||

ಹೇಳುವವನು ಅವಿವೇಕಿಕೇಳುವವನು ಅಜ್ಞಾನಿಹೇಳುವ  ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ||5||

Leave a Comment

Your email address will not be published. Required fields are marked *